
ಅವ್ಯವಸ್ಥೆಯೂ ಕೂಡಾ ಒಂದು ವ್ಯವಸ್ಥೆಯೇ ಅಂತ ಹೇಳುತ್ತಾರೆ. ಅದಕ್ಕೆ ಕಾಡಿನ ಉದಾಹರಣೆ ನೀಡುತ್ತಾರೆ. ತನ್ನಂತಾನೆ ಹೇಗೆ ಬೇಕೋ ಹಾಗೆ ಬೆಳೆವ ಕಾಡು ತನ್ನ ಅವ್ಯವಸ್ಥೆಯಲ್ಲಿಯೇ ವ್ಯವಸ್ಥೆಯೊಂದನ್ನು ರೂಪಿಸಿಕೊಂಡಿರುತ್ತದೆ. ಅದನ್ನು ಶಿಸ್ತಿಗೆ ಒಳಪಡಿಸಲು ವ್ಯವಸ್ಥೆ ಅಂತ ಹೋದಲ್ಲಿ ಆಗ ಕಾಡು ನಾಶವೇ ಆಗುವ ಸಂಭವ ಕೂಡಾ ಇರುತ್ತದೆ ಎಂದು ಜೀವವಿಜ್ಞಾನ ತಜ್ಞರು ಹೇಳುತ್ತಾರೆ. ಈಗ ಪ್ರಶ್ನೆ ಇರುವುದು ನಮ್ಮ ಕಿರುತೆರೆ ಮಾಧ್ಯಮ ಕೂಡಾ ಒಂದು ಕಾಡಿನ ಹಾಗೆ ತನ್ನಂತಾನೇ ಹೇಗೇಗೋ ಎಲ್ಲೆಲ್ಲೋ ಬೆಳೆದುಕೊಂಡಿದೆ. ಅದನ್ನು ನಾವು ಶಿಸ್ತಿಗೆ ಒಳಪಡಿಸಬೇಕಾ ಬೇಡವಾ? ಹಾಗೆ ಶಿಸ್ತಿಗೆ ತರಬೇಕು ಎಂದರೆ ಅಲ್ಲಿ ಸಂಘಟನೆಯಾಗಬೇಕು. ಅದು ನಮ್ಮ ಕಿರುತೆರೆ ಮಾಧ್ಯಮಕ್ಕೆ ತುಂಬ ಅವಶ್ಯಕ ಹೌದೋ ಅಲ್ಲವೋ? ಖಂಡಿತಾ ಅವಶ್ಯಕತೆ ಇದೆ. ಏಕೆಂದರೆ ಈ ಮಾಧ್ಯಮ ಖಂಡಿತವಾಗಿ ಕಾಡಲ್ಲಾ ಅಥವಾ ಕಾಡಿನಲ್ಲೂ ಇಲ್ಲಾ. ಈ ನಮ್ಮ ಸಮಾಜದಲ್ಲಿ ಸಮಾಜಮುಖಿಯಾಗಿ ಸಶಕ್ತವಾಗಿರುವ ಈ ಮಾಧ್ಯಮಕ್ಕೆ ಒಂದು ಶಿಸ್ತು ಬೇಕಾಗಿದೆ. ಆ ಶಿಸ್ತು ಸಿಗಬೇಕೆಂದರೆ ಅದಕ್ಕೆ ಸಂಘಟನೆ ಬೇಕೇಬೇಕಾಗಿದೆ. ಈಗ ನಮ್ಮಲ್ಲಿ ಸಂಘಟನೆಯ ಬಗ್ಗೆ ಒಂದಷ್ಟು ಸ್ಫೂರ್ತಿದಾಯಕ ಮಾತುಗಳು ಕೇಳಿ ಬರುತ್ತಿವೆ. ಆದರೂ ನಾವು ಕ್ರಮಿಸಬೇಕಾದ ದಾರಿ ಬಹಳ ದೂರವಿದೆ. ಜೊತೆಯಲ್ಲಿ ನೀವು ಇದ್ದರೆ ಉತ್ಸಾಹದಿಂದ ಹೆಜ್ಜೆ ಹಾಕಬಹುದು.
ನಮ್ಮ ಈ ಚಿಂತನೆಗಳಲ್ಲಿ ಸದಸ್ಯರ ಮನಗೆಲ್ಲುವ ಕಾರ್ಯಕ್ರಮಗಳು, ಉಪಯುಕ್ತ ಯೋಜನೆಗಳು ಹಲವಾರು ಇವೆ. ಆದರೆ ಇವೆಲ್ಲವನ್ನೂ ಏಕಕಾಲದಲ್ಲಿ ಕಾರ್ಯರೂಪಕ್ಕೆ ತರುವಷ್ಟು ಸಂಘ ಶಕ್ತಿಯುತವಾಗಿಲ್ಲ. ಉದ್ಯಮದಲ್ಲಿ ಗುರುತಿಸಿಕೊಂಡಿರುವ ಅನೇಕ ಬಲಿಷ್ಠರು ಇದ್ದರೂ ಉದ್ಯಮದ ಒಳಿತಿನ ಬಗ್ಗೆ ಚಿಂತಕರು ಉದಯಿಸಲು ಇನ್ನಷ್ಟು ಸಮಯಾವಕಾಶದ ಅವಶ್ಯಕತೆ ಇದೆ. ಮುಖ್ಯವಾಗಿ ಎಲ್ಲೇ ಹೋದರೂ ಇದ್ದದ್ದೇ ಎನ್ನುವ ಒಂದು ಸಮಸ್ಯೆ ನಮ್ಮಲ್ಲಿದೆ. ಅದು ‘ಇಗೋ’ ಅಥವಾ ಅಹಂಕಾರ. ನಮ್ಮ Television ಉದ್ಯಮದಲ್ಲಿ EGO ಗೆ ಮಹತ್ವದ ಪಾತ್ರವಿದೆ. ಅದು ನಮ್ಮ ನಮ್ಮಲ್ಲಿ competition create ಮಾಡಿ ಒಬ್ಬರನ್ನೊಬ್ಬರು ದ್ವೇಷಿಸುವಂತೆ ಮಾಡಿದೆ. healthy competition ಇದ್ದಲ್ಲಿ, ಒಳ್ಳೆಯ ವಾತಾವರಣ ಮೂಡಬಹುದು. ಆ ವಾತಾವರಣ ಮೂಡಿಸಿ ಉತ್ತಮ ಬಾಂಧವ್ಯ ಬೆಸೆಯುವ ಉದ್ದೇಶ ಸಂಘಟನೆಯಿಂದ ಮಾತ್ರ ಸಾಧ್ಯವಿದೆ.
ಹಲವಾರು ವಲಯಗಳು ಇರುವ TV ಉದ್ಯಮ, ಪ್ರಬಲವಾಗಿ ಹರಡುತ್ತಾ ಬೆಳೆದು ಸಾಕಷ್ಟು ಜನರ ಬದುಕಿಗೆ ಆಧಾರವಾಗಿದೆ. ಉದ್ಯಮದ ಬೆಳವಣಿಗೆಗೆ corporate ಜಗತ್ತು ಆವರಿಸಿಕೊಂಡಿದ್ದು ಒಂದು ರೀತಿಯಲ್ಲಿ ತುಂಬ ಉಪಯುಕ್ತ ಎನಿಸಿದರೂ ಮತ್ತೊಂದು ರೀತಿಯಲ್ಲಿ ಜೀತಪದ್ದತಿಗೆ ಜೋತುಬಿದ್ದೆವೇನೋ ಎನಿಸುತ್ತದೆ.
ನಮ್ಮ ಸಂಸ್ಥೆಯ ಬೆಳವಣಿಗೆ ಮತ್ತೊಂದು ಮಜಲು ಮುಟ್ಟಿದೆ ಎಂದು ಹೇಳಲು ಸಂತೋಷವಾಗುತ್ತಿದೆ. KTVA ಮತ್ತು TCSC ನಡುವಿನ ಸಣ್ಣ ಗೊಂದಲ ನಿವಾರಣೆ ಆಗಿ, ಕ್ಲಬ್ ಆವರಣದಲ್ಲಿ Office ಆರಂಭವಾಗಲಿದೆ. 2023 September 1 ರಂದು ನವೀಕರಣ ಮಾಡಲು ವಿಘ್ನ ನಿವಾರಣೆಗಾಗಿ ಪೂಜೆ ಮಾಡಿ ಅಡಿಪಾಯ ಹಾಕಿ ಕಾರ್ಯಾರಂಭ ಮಾಡಿದ್ದೇವೆ.
ಏಖಿಗಿಂಯು ಮುಂದಿನ ದಿನಗಳಲ್ಲಿ ತನಗಾಗಿ ನೀಡಿರುವ ಆ ಜಾಗದಲ್ಲಿ ಕಾರ್ಯ ನಿರ್ವಹಿಸಲಿದೆ. ಬಹುದಿನಗಳ ಕನಸು ಈಡೇರಲು ಕಾರಣರಾದ TCSC ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗು ಕಾರ್ಯಕಾರಿ ಸಮಿತಿಗೆ KTVA ಯ ಕೃತಜ್ಞತೆಗಳು.
