ಕೆಟಿವಿಎ ಸದಸ್ಯರಿಗೆ ಅಧಿಕೃತ ಗುರುತುಪತ್ರ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಮೊದಲಿಗೆ ಕಾರ್ಯಕಾರಿ ಮಂಡಳಿಯಲ್ಲಿರುವ ಎಲ್ಲಾ ಸದಸ್ಯರ ಗುರುತು ಪತ್ರವನ್ನು ವಿನ್ಯಾಸಗೊಳಿಸಲಾಗಿದೆ. ಅದರಲ್ಲಿ ಕೆಲವು ಸದಸ್ಯರ ಗುರುತು ಪತ್ರವನ್ನು ಎಲ್ಲ ಸದಸ್ಯರ ಗಮನಕ್ಕೆ ತರುವ ಉದ್ದೇಶದಿಂದ ಇಲ್ಲಿ ನೀಡಲಾಗಿದೆ.
ಕೆಟಿವಿಎ ಸದಸ್ಯರಿಗೆ ಈ ಹಿಂದಿನ ತಮ್ಮ ಸದಸ್ಯತ್ವವನ್ನು ನವೀಕರಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗಿದ್ದು ಅದು ಈಗ ಮುಕ್ತಾಯವಾಗಿದೆ. ಅಜೀವ ಸದಸ್ಯತ್ವ ಪಡೆದ ಸದಸ್ಯರಿಗೆ ಅಜೀವ ಸದಸ್ಯತ್ವದ ಕಾರ್ಡ್ ನೀಡುವ ಮಾದರಿಯನ್ನು ಇಲ್ಲಿ ತೋರಿಸಲಾಗಿದೆ. ಗಮನಿಸಿ. ಇಲ್ಲಿಯವರೆಗೂ ಅಜೀವ ಸದಸ್ಯತ್ವವನ್ನು ನವೀಕರಿಸಿಕೊಂಡವರಿಗೆ ಸೀನಿಯಾರಿಟಿ ಆಧಾರದ ಮೇಲೆ ಹೊಸ ನಂಬರ್ ಅನ್ನು ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿ ಇತ್ತು. ಇನ್ನು ಮುಂದೆ ತಮ್ಮ ಅಜೀವ ಸದಸ್ಯತ್ವವನ್ನು ನವೀಕರಿಸಿಕೊಳ್ಳಲು ಪ್ರಯತ್ನಿಸುವ ಸದಸ್ಯರಿಗೆ ಅವರ ಹಿರಿತನದ ಗುರುತು ಪತ್ರ ನೀಡಲು ಸಾಧ್ಯವಾಗುವುದಿಲ್ಲ. ಅವರು ಆ ಸವಲತ್ತನ್ನು ಕಳೆದುಕೊಂಡಿರುತ್ತಾರೆ. ಇನ್ನು ಮುಂದೆ ಸದಸ್ಯರಾಗುವ ಯಾವುದೇ ಸದಸ್ಯರು ಕೂಡಾ ಹೊಸ ಸೀನಿಯಾರಿಟಿ ನಂಬರ್ ಪಡೆಯಲು ಅರ್ಹರಾಗಿರುತ್ತಾರೆ.
ಗುರುತುಪತ್ರವನ್ನು ಗಮನಿಸಿ ನೋಡಿದರೆ ಹೊಸ ಸೀನಿಯಾರಿಟಿ ನಂಬರ್ ಜೊತೆಗೆ ಅವರು ಪ್ರತಿನಿಧಿಸುವ ವಿಭಾಗ ಯಾವುದು ಮತ್ತು ಅದರಲ್ಲಿ ಅವರು ಯಾವ ಸ್ಥಾನದಲ್ಲಿ ಇದ್ದಾರೆ ಎಂಬುದನ್ನು ಕೂಡ ಸೂಚಿಸುವ ವಿಶೇಷ ಸಂಖ್ಯೆಯನ್ನು ನೀಡಲಾಗುತ್ತಿದೆ. ಲೈಫ್ ಮೆಂಬರ್ ಎಂಬುದನ್ನು ಕೂಡ ಮುದ್ರಿಸಲಾಗಿದೆ. ತಾತ್ಕಾಲಿಕ ಸದಸ್ಯರಿಗೆ ಕಾರ್ಡ್ನ ಬಣ್ಣ ವಿನ್ಯಾಸಗಳು ಬದಲಾಗುತ್ತವೆ ಮತ್ತು ಕಾರ್ಡ್ನ ಸದಸ್ಯತ್ವದ ಅವಧಿಯ ಆರಂಭದ ದಿನಾಂಕ ಮತ್ತು ಮುಕ್ತಾಯದ ದಿನಾಂಕವನ್ನು ಕೂಡ ನಮೂದಿಸಲಾಗುತ್ತದೆ.
ಇನ್ನುಳಿದಂತೆ ಕಾರ್ಡಿಗೆ ಅವಶ್ಯಕತೆ ಇರುವ ಮಾಹಿತಿಗಳು ಎಲ್ಲವನ್ನು ಕೂಡ ಇಲ್ಲಿ ಸೂಚಿಸಲಾಗಿದೆ. ಸದಸ್ಯರು ಗಮನಿಸಬಹುದು.
ಎಲ್ಲ ಸದಸ್ಯರಿಗೂ ಕೂಡ ತಮ್ಮ ಸದಸ್ಯತ್ವದ ಕಾರ್ಡುಗಳಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೆಸರು, ವಿಭಾಗ, ವಿಳಾಸ, ದೂರವಾಣಿ ಸಂಖ್ಯೆ, ಬ್ಲಡ್ ಗ್ರೂಪ್… ಇತ್ಯಾದಿ ವಿವರಗಳು ಮತ್ತು ಉತ್ತಮವಾದ ಭಾವಚಿತ್ರ ಎಲ್ಲವನ್ನು ಸಹ ಸರಿಯಾದ ರೀತಿಯಲ್ಲಿ ಪರಿಹರಿಸಿಕೊಂಡು ನಂತರ ಸದಸ್ಯರ ಅನುಮತಿಯ ಮೇರೆಗೆ ಕಾರ್ಡ್ ಅನ್ನು ಪ್ರಿಂಟಿಗೆ ಕಳುಹಿಸುವ ತೀರ್ಮಾನವನ್ನು ಮಂಡಳಿಯು ಕೈಗೊಂಡಿದೆ.
ಕಾರ್ಡ್ ಮುದ್ರಣದ ಖರ್ಚು ವೆಚ್ಚ ನೂರು ರೂಪಾಯಿಗಳು ಎಂದು ನಿರ್ಧರಿಸಲಾಗಿದೆ. ಸದಸ್ಯರು ಕಚೇರಿಯನ್ನು ಸಂಪರ್ಕಿಸಿ ನಿಮ್ಮ ವಿವರಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಪಡೆದುಕೊಂಡು ಅದೇ ರೀತಿಯಲ್ಲಿ ನಿಮ್ಮ ಸದಸ್ಯತ್ವದ ಕಾರ್ಡ್ನ ವಿವರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಲು ಕೋರಲಾಗಿದೆ. ಗುರುತು ಪತ್ರದ ಶುಲ್ಕವನ್ನು ಪಡೆದುಕೊಂಡ ನಂತರ ಸದಸ್ಯರ ಅನುಮತಿಯ ಮೇಲೆ ಗುರುತು ಪತ್ರವನ್ನು ಮುದ್ರಣಕ್ಕೆ ಕಳುಹಿಸುವ ತೀರ್ಮಾನವನ್ನು ಮಂಡಳಿ ಕೈಗೊಂಡಿದೆ.
ಈ ಮಾಹಿತಿಯನ್ನು ಎಲ್ಲ ಸದಸ್ಯರು ಕೂಡ ತಮ್ಮ ಸಹಸದಸ್ಯರಿಗೆ ದಾಟಿಸುವ ಮೂಲಕ ಈ ಪ್ರಯತ್ನವನ್ನು ಯಶಸ್ವಿಗೊಳಿಸಬೇಕು ಎಂದು ಈ ಮೂಲಕ ಕೋರಲಾಗುತ್ತಿದೆ.
ಹೆಚ್ಚಿನ ವಿವರಗಳಿಗೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
