KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
No Result
View All Result

“ಲಾಯರ್ ಆಗಿ ವಿಫಲನಾದೆ. ಲಾಯರ್ ಪಾತ್ರ ಮಾಡಿ ಸಫಲನಾದೆ” : ಶ್ರೀ ಟಿ ಎನ್ ಸೀತಾರಾಮ್

September 24, 2023
0 0

ಕಿರುತೆರೆಯ ಸಾರ್ವಕಾಲಿಕ ತಾರೆಯರಲ್ಲಿ ನಿಸ್ಸಂಶಯವಾಗಿ ಒಬ್ಬರು ಖ್ಯಾತ ಕಲಾವಿದ, ಬರಹಗಾರ ಮತ್ತು ನಿರ್ದೇಶಕರಾದ ಶ್ರೀ ಟಿ ಎನ್ ಸೀತಾರಾಮ್ ಅವರು. ಕಥೆಗಾರರಾಗಿ, ಚಿತ್ರಕಥೆಗಾರರಾಗಿ, ಸಂಭಾಷಣಾಕಾರರಾಗಿ, ನಿರ್ದೇಶಕರಾಗಿ ಕಿರುತೆರೆಯ ಇತಿಹಾಸದಲ್ಲಿಯೇ ಹೊಸ ಅಧ್ಯಾಯಗಳನ್ನು ಸೃಷ್ಟಿಸಿದವರು.

ಕನ್ನಡ ಕಿರುತೆರೆಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಮಾಯಾಮೃಗ ಧಾರಾವಾಹಿ 1998ರಲ್ಲಿ ದೂರದರ್ಶನದಲ್ಲಿ ಪ್ರಸಾರ ಕಂಡಿದ್ದು ಈಗಲೂ ಕೂಡ ತನ್ನ ಅನನ್ಯತೆಯಿಂದ ಕಿರುತೆರೆ ಲೋಕದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಜನಪ್ರಿಯ ಧಾರಾವಾಹಿಗಳಲ್ಲಿ, ಸಾಮಾನ್ಯ ಜನಪ್ರಿಯ ಧಾರಾವಾಹಿಗಳು ಮತ್ತು ವಿಶೇಷ ಕಥಾವಸ್ತು ಹೊಂದಿದ ಜನಪ್ರಿಯ ಧಾರಾವಾಹಿಗಳು ಎಂಬ ಎರಡು ವಿಭಾಗಗಳನ್ನು ಗುರುತಿಸಬಹುದು. ಮೊದಲನೆಯ ಜನಪ್ರಿಯ ಧಾರಾವಾಹಿಗಳ ಗುಂಪಿನಲ್ಲಿ ಸಾಧಾರಣವಾದ ಸಾಂಸಾರಿಕ ಅಥವಾ ಮನೋರಂಜಕ ಕಥಾವಸ್ತು ಉಳ್ಳ ಜನಪ್ರಿಯ ಧಾರಾವಾಹಿಗಳು ಕಂಡುಬರುತ್ತವೆ. ಎರಡನೆಯ ವಿಭಾಗದಲ್ಲಿ, ಸಾರ್ವಕಾಲಿಕ ಮೌಲ್ಯಗಳನ್ನು ಅಥವಾ ವಿಶೇಷ ಕಥಾವಸ್ತುಗಳನ್ನು ಹೊಂದಿರುವಂತಹ ಜನಪ್ರಿಯ ಧಾರಾವಾಹಿಗಳು ಕಂಡುಬರುತ್ತವೆ. ಆ ಲೆಕ್ಕಾಚಾರದಲ್ಲಿ ವಿಶೇಷ ಕಥಾವಸ್ತು ಹೊಂದಿದ್ದು ಸಹಾ ಜನಪ್ರಿಯವಾದ ಧಾರಾವಾಹಿಗಳಲ್ಲಿ ಮಾಯಾಮೃಗ ಕೂಡ ಒಂದು. ಹಾಗಾಗಿಯೇ 25 ವರ್ಷ ಕಳೆದ ನಂತರವೂ ಕೂಡ ಸೀತಾರಾಮ್ ಅವರ ಮಾಯಾಮೃಗ ಧಾರಾವಾಹಿಯು ಹೊಸರೂಪದಲ್ಲಿ ‘ಮತ್ತೆ ಮಾಯಾಮೃಗ’ ಎಂಬ ಧಾರಾವಾಹಿಯಾಗಿ, ‘ಸಿರಿಕನ್ನಡ’ ಕಿರುತೆರೆವಾಹಿನಿಯಲ್ಲಿ ಈಗಲೂ ಪ್ರಸಾರವಾಗುತ್ತಿರುವುದೇ ಈ ಧಾರಾವಾಹಿಯ ಜನಪ್ರಿಯತೆಗೆ ಸಾಕ್ಷಿ.

ಆನಂತರದ ದಿನಗಳಲ್ಲಿ ಸೀತಾರಾಮ್ ಅವರ ಪ್ರತಿಭೆ ವಿಶೇಷ ರೂಪದಲ್ಲಿ ಹೊರಬಂದದ್ದು ಮನ್ವಂತರ, ಮುಕ್ತ, ಮುಕ್ತ ಮುಕ್ತ ಧಾರಾವಾಹಿಗಳ ಮೂಲಕ. ತನ್ನ ವಿಶಿಷ್ಟ ಕಥಾವಸ್ತು ಮತ್ತು ನಿರೂಪಣೆ ಜೊತೆಗೆ ಸ್ವತಃ ಟಿ ಎನ್ ಸೀತಾರಾಮ್ ಅವರು ಲಾಯರ್ ಪಾತ್ರದಲ್ಲಿ ಅಭಿನಯಿಸಿದ್ದು ಈ ಧಾರಾವಾಹಿಗಳ ಅತ್ಯಂತ ವಿಶಿಷ್ಟ ಆಕರ್ಷಣೆ. ಲಾಯರ್ ‘ಸಿಎಸ್‌ಪಿ’ ಎಂಬ ಪಾತ್ರ ಅವರ ಹೆಸರಿಗೆ ಪರ್ಯಾಯವಾಗಿ ಅಂಟಿಕೊಂಡೇ ಬಿಟ್ಟಿತೇನೋ ಎಂಬಷ್ಟು ಸೀತಾರಾಮ್ ಅವರು ಆ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿಬಿಟ್ಟರು. ಒಬ್ಬ ಲಾಯರ್ ಆಗಿ ಅಪರಾಧಿಗಳ ಅಪರಾಧವನ್ನು, ಸ್ಪಷ್ಟವಾಗಿ ಪ್ರಶ್ನೋತ್ತರಗಳ ಮೂಲಕ ಕಟ್ಟಿ ಕೆಡಹುವುದರಲ್ಲಿ ಅವರು ತೋರಿಸಿದ ಅಸಾಮಾನ್ಯ ಜಾಣ್ಮೆ ಮತ್ತು ಪ್ರತಿಭೆ, ಅವರಿಗೆ ಇಡಿಯ ಕನ್ನಡ ಕಿರುತೆರೆ ವೀಕ್ಷಕರಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿತು. ಕೋರ್ಟ್ ಕಲಾಪಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತಹ ರೀತಿಯಲ್ಲಿ ಅತ್ಯಂತ ವಿಶೇಷವಾಗಿ ಕಟ್ಟಿಕೊಟ್ಟ ಹೆಮ್ಮೆ ಅವರದು. ಸ್ವತಃ ಲಾಯರ್‌ಗಳು ನ್ಯಾಯಾಧೀಶರುಗಳೇ ಸೀತಾರಾಮ್ ಅವರ ಧಾರಾವಾಹಿಗಳನ್ನು, ಕಿರುತೆರೆಯ ಮುಂದೆ ಕಟ್ಟಿ ಹಾಕಿದಂತೆ ಕುಳಿತು ವೀಕ್ಷಿಸಿದ್ದು ಹೆಮ್ಮೆಯ ವಿಚಾರ. ಈ ಮೂಲಕವೇ ಅವರು ಕನ್ನಡ ಟಿವಿ ಪ್ರೇಕ್ಷಕರ ಮನೆಗೆದ್ದರು ಮತ್ತು ತಾರೆಯಾಗಿ ಬೆಳೆದರು ಎಂದು ನಿಶ್ಚಿತವಾಗಿ ಹೇಳಬಹುದು.

ಅವರ ಧಾರಾವಾಹಿಗಳು ಜನಸಾಮಾನ್ಯರಲ್ಲಿ ಕೇವಲ ಮನೋರಂಜನೆಯನ್ನು ಮಾತ್ರಾ ಬಿತ್ತಲಿಲ್ಲಾ. ವಿಚಾರವಂತಿಕೆಯನ್ನು ಕೂಡಾ ಹುಟ್ಟಿಹಾಕಿದವು. ಅದರ ಸ್ಪಷ್ಟ ರೂಪ ಸಿಕ್ಕಿದ್ದೇ ಈ ಧಾರಾವಾಹಿಗಳನ್ನು ಕಿರುತೆರೆಗೆ ತರುವ ಸಮಯದಲ್ಲಿ ಅವರು ನಡೆಸಿದ ವಿಶಿಷ್ಟ ‘ಸಂವಾದ’ ಕಾರ್ಯಕ್ರಮಗಳು. ಈ ಕಾರ್ಯಕ್ರಮ ಇವತ್ತಿಗೂ ಕೂಡಾ ಕಿರುತೆರೆಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಅನನ್ಯ ಮತ್ತು ಅದ್ಭುತ ಎಂದೇ ಪರಿಗಣಿಸಬಹುದು. ಕರ್ನಾಟಕದ ಉದ್ದಗಲಕ್ಕೂ ತಮ್ಮ ಧಾರಾವಾಹಿಗಳ ಕುರಿತು ಜನಸಾಮಾನ್ಯರೊಂದಿಗೆ ಸಂವಾದ ಏರ್ಪಡಿಸಿದ್ದ ಸೀತಾರಾಮ್ ಅವರು ಅಲ್ಲಿ ವೀಕ್ಷಕರಿಂದ ಪ್ರೀತಿ ಅಭಿನಂದನೆ ಮತ್ತು ಪ್ರಶ್ನೆಗಳನ್ನು ಎದುರಿಸಿದರು. ಅವೆಲ್ಲ ಒಂದು ಸಮರ್ಥ ಧಾರಾವಾಹಿಯನ್ನು ಜನ ಯಾವ ಮಟ್ಟಕ್ಕೆ ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ಆನಂತರ ಕೂಡಾ ಅನೇಕರು ಆ ರೀತಿಯ ಸಂವಾದ ಕಾರ್ಯಕ್ರಮಗಳನ್ನು ಮಾಡಲು ಮುಂದಾಗಿದ್ದರೂ ಸೀತಾರಾಮ್ ಅವರ ಧಾರಾವಾಹಿಗಳಿಗೆ ಸಿಕ್ಕಂಥಹಾ ಸ್ಪಂದನ ಮತ್ತು ಜನಪ್ರಿಯತೆ ಇನ್ನಾವ ಧಾರಾವಾಹಿಗೂ ಸಿಗದೇ ಇರುವುದನ್ನು ಗಮನಿಸಬೇಕು.

ಡಿಗ್ರಿ ಮುಗಿಸಿದ ನಂತರ ಎಲ್ ಎಲ್ ಬಿ ಓದಿ ಒಂದಷ್ಟು ದಿವಸ ಕರಿಕೋಟು ತೊಟ್ಟು ನ್ಯಾಯವಾದಿಗಳಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಕ ದಿನಗಳಲ್ಲಿ ಕಂಡಿದ್ದ ಸೀತಾರಾಮ್ ಅವರಿಗೆ ಆ ವೃತ್ತಿಯಲ್ಲಿ ಯಶಸ್ಸು ಸಿಕ್ಕಲಿಲ್ಲ. “ನಾನು ಲಾಯರ್ ಆಗಿ ವಿಫಲನಾದೆ. ಆದರೆ ಲಾಯರ್ ಪಾತ್ರ ಮಾಡಿ ಸಫಲನಾದೆ” ಎಂದು ಅವರು ನಗುತ್ತಾ ಹೇಳುವುದರಲ್ಲಿ ಬದುಕಿನ ಸೋಜಿಗವೇ ಅಡಗಿದೆ.

ವೃತ್ತಿಯಲ್ಲಿ ಯಶಸ್ಸು ಸಿಕ್ಕದಿದ್ದರೆ ಏನಂತೆ? ಪ್ರವೃತ್ತಿಯಾಗಿ ಆಯ್ದುಕೊಂಡಿದ್ದ ಬರಹ ಅವರನ್ನು ನಿಧಾನಕ್ಕೆ ಕೈ ಹಿಡಿದು ನಡೆಸುತ್ತಾ ಕೊನೆಗೊಮ್ಮೆ ಯಶಸ್ಸಿನ ಶೃಂಗಕ್ಕೆ ಏರಿಸಿತು. ಆರಂಭಿಕ ದಿನಗಳಲ್ಲಿ ಕಿರುತೆರೆ ಇನ್ನೂ ಪ್ರಬಲವಾಗಿಲ್ಲದ ಸಮಯದಲ್ಲಿಯೇ ಕನ್ನಡದ ದಿಗ್ಗಜರಾದ ಪುಟ್ಟಣ್ಣ ಕಣಗಾಲ್, ಪಿ.ಲಂಕೇಶ್, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ, ಯು ಆರ್ ಅನಂತಮೂರ್ತಿ ಮುಂತಾದವರ ಜೊತೆ ತಮ್ಮ ಬರಹದ ಬಾಂಧವ್ಯ ಬೆಳೆಸಿಕೊಂಡಿದ್ದ ಸೀತಾರಾಮ್ ಅವರು, ಹಲವಾರು ಚಿತ್ರಗಳಿಗೆ ಕಥೆ ಚಿತ್ರಕಥೆ ಸಂಭಾಷಣೆಯನ್ನು ಬರೆಯುವ ಮೂಲಕ ಹಿರಿತೆರೆಯಲ್ಲಿ ಪಯಣ ಸಾಗಿಸಿದ್ದರು. 1990ರಲ್ಲಿ ದೂರದರ್ಶನಕ್ಕಾಗಿ ಸಂಕಲನ ಎಂಬ ಕೃತಿಯ ಮೂಲಕ ಪ್ರವೇಶ ದೊರಕಿದ್ದು. ಅದೇ ದೂರದರ್ಶನದಲ್ಲಿಯೇ ಮಾಯಾಮೃಗ ಧಾರಾವಾಹಿ ಪ್ರಸಾರವಾಗಿ ಜನಪ್ರಿಯವಾಗಲು ಎಂಟು ವರ್ಷಗಳವರೆಗೂ ಕಾಯಬೇಕಾಯಿತು. ಅದಾದ ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 2001ರಲ್ಲಿ ಪ್ರಸಾರವಾದ ಮನ್ವಂತರ, ಆನಂತರದ ಮುಕ್ತ, ಆನಂತರದ ಮುಕ್ತ ಮುಕ್ತ ಧಾರಾವಾಹಿಗಳು ಮಾಡಿದ ಮೋಡಿಯನ್ನು ಕಿರೆತೆರೆ ಮರೆಯುವಂತೆಯೇ ಇಲ್ಲ.

ವಿಶ್ರಾಂತ ಜೀವನ ಪದ್ದತಿಗೆ ಪ್ರತಿಭಟನೆಯ ಬಿಸಿ ತಾಗಿಸಿ ಇಂದಿಗೂ ಕಿರಿಯರೂ ನಾಚುವಷ್ಟು ಕಿರುತೆರೆಯಲ್ಲಿ ಸಕ್ರಿಯರಾಗಿರುವ ಶ್ರೀ ಸೀತಾರಾಮ್ ರವರು, ಕಿರುತೆರೆಯ ಪರಂಪರೆಗೇ ಒಂದು ಮಾದರಿ ಮತ್ತು ಸ್ಫೂರ್ತಿ. ನಮ್ಮ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಪ್ರಾಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೂ ತಪ್ಪದೆ ಪ್ರೀತಿಯಿಂದ ಹಾಜರಿದ್ದು, ಮನಃಪೂರ್ವಕವಾಗಿ ಹಾರೈಸುವ ಶ್ರೀ ಟಿ ಎನ್ ಸೀತಾರಾಮ್ ಅವರಿಗೆ ಕರ್ನಾಟಕ ಟೀವಿ ಅಸೋಸಿಯೇಷನ್ ಮತ್ತು ಟೀವಿ-ಠೀವಿ ಪತ್ರಿಕೆಯ ಗೌರವ ನಮನಗಳು.

ShareShareSendShareTweetSend

Leave a Reply Cancel reply

Your email address will not be published. Required fields are marked *

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್

ಕನ್ನಡ ದೂರದರ್ಶನ ಉದ್ಯಮದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.

ಕ್ವಿಕ್ ಲಿಂಕ್ಸ್

  • ನಮ್ಮ ಕುರಿತು
  • ಯೋಜನೆಗಳು
  • ಕಾರ್ಯಕ್ರಮಗಳು
  • ಲೇಖನಗಳು
  • ಸುದ್ಧಿಗಳು
  • ಸಂಪರ್ಕಿಸಿ

ಫಾಲೋ ಅಸ್

ಡೌನ್‌ಲೋಡ್ ಆಂಡ್ರಾಯ್ಡ್ ಅಪ್ಲಿಕೇಶನ್‌

  • ನಮ್ಮ ಕುರಿತು
  • ಸಂಪರ್ಕಿಸಿ
  • ಪ್ರೈವಸಿ ಪಾಲಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech