KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
No Result
View All Result

ತೇರು ಎಳೆಯೋಣ…

ಸಂಜೀವ್ ತಗಡೂರ್ - ಸಮಿತಿಗಳ ಸಂಚಾಲಕರು, ಕೆ.ಟಿ.ವಿ.ಎ.

July 9, 2023
0 0

ಚೈತನ್ಯ ಅಂದರೆ ಅದು ಶಕ್ತಿ…… ಸಂಘಟನೆಗೆ ಸ್ಪೂರ್ತಿ. ನಮ್ಮೆಲ್ಲರಲ್ಲೂ ಸಂಘಟನಾತ್ಮಕ ಶಕ್ತಿ ತುಂಬಿದ ಪದ ಚೈತನ್ಯ.

ಅವರು ಶುರು ಮಾಡೋದೇ ಹಾಗೆ.. ಸಾರ್… ಅಂತಲೇ. ಸಾರ್.. ಈಗ ಎಲ್ಲರನ್ನು ಸೇರಿಸ್ತಾ ಇದ್ದೀವಿ, …ಮಾತಾಡ್ತಾ ಇದ್ದೀವಿ ….ಅಲ್ಲವಾ. ಈ ಸಭೆಗೆ ಒಂದು ಹೆಸರು ಕೊಡೋಣಾ ಚೆನ್ನಾಗಿರುತ್ತೆ ಅಂದ್ರು. ನಾವು ಎಲ್ಲಾ ತಲೆಕೆಡಿಸ್ಕೊಂಡು ಒಬ್ಬರು ಒಂದೊಂದು ಹೆಸರು ಕೊಟ್ವಿ… ಅದ್ರೆ ಅವರೇ ಕೊಟ್ಟ/ ಇಟ್ಟ ಹೆಸರು ಎಲ್ಲರಿಗೂ ಇಷ್ಟ ಆಯ್ತು. ಅದೇ …..ಚೈತನ್ಯ.

ಅಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಟಿ ಇನ್ಸಿಟ್ಯೂಟ್ನಲ್ಲಿ ನಮ್ಮ ಈ ಚೈತನ್ಯದ ಮೊದಲ ಸಭೆ. ಟೀವಿ ಉದ್ಯಮದ ಎಲ್ಲಾ ಹಿರಿಯರಿಗೂ, ಸಂಘಕ್ಕಾಗಿ ದುಡಿಯುತ್ತಿರುವವರಿಗೂ ಎಲ್ಲರಿಗೂ ಆಹ್ವಾನಿಸಿದೆವು. ಕರೆದವರೆಲ್ಲಾ ಪ್ರೀತಿಯಿಂದ ಬಂದರು. ಅವರವರ ಮಾತುಗಳು ಆದವು. ಒಟ್ಟಿಗೆ ಎಲ್ಲರ ಸಂದೇಶ ಒಗ್ಗಟ್ಟಾಗಿ ಸಂಘಟನೆ, ಸಂಘವನ್ನು ಬಲಪಡಿಸುವುದು.

ಅವರ ಮಾತುಗಳು ಅಂದು ನಮಗೆ ಚೈತನ್ಯ ತಂದಿತು. ಬಹಳಷ್ಟು ಮಂದಿ ಅಂದಿನ ಉದ್ದೇಶ ಮುಂದಿನ ಸಂಘದ ಚುನಾವಣೆಗೆ ತಯಾರಿ ಅಂದರು. ಖಂಡಿತವಾಗಿ ಅದು ತಯಾರಿಯಲ್ಲ, ಅಷ್ಟೊಂದು ಚಟುವಟಿಕೆ ಇಲ್ಲದೇ ಮಲಗಿದ್ದ ಸಂಘಟನೆಯನ್ನು ಹುರಿದುಂಬಿಸಿ ಚೈತನ್ಯ ತುಂಬಲು ಎಲ್ಲರೂ ಬನ್ನಿ ಸಂಘಟಿತರಾಗೋಣ ಸಂಘಕ್ಕಾಗಿ ನಾವು ನಮಗಾಗಿ ಸಂಘ ಎಂಬ ಉದ್ದೇಶದಿಂದ ನಡೆಸಿದ ಚೈತನ್ಯ ಸಭೆ.

ಅಂದು ಸಿಕ್ಕಿದ ಈ ಚೈತನ್ಯದ ಶಕ್ತಿ ಸದಸ್ಯರ ಸಹಮತದಿಂದ ಇಂದು ನಮ್ಮ ಕೆ.ಟಿ.ವಿ.ಎ. ಸಂಸ್ಧೆಯು ಹಲವಾರು ಯೋಜನೆಗಳನ್ನು ಹೊತ್ತು ಸದಸ್ಯರ ಒಳಿತಿಗಾಗಿ ಹೊಸ ರೂಪು ರೇಖೆಗಳೂಂದಿಗೆ, ಉತ್ತಮ, ಉತ್ಸಾಹಿ, ಕಾರ್ಯಕಾರಿ ಸಮಿತಿಯ ತಂಡದೊಂದಿಗೆ ಈ ಎರಡು ವರ್ಷ ಸಾಧನೆಯ ಹಾದಿಯನ್ನು ತುಳಿಯಲು ಹಗಲಿರುಳು ಪಣತೊಟ್ಟು ನಿಂತಿದೆ.

ಹೇಳಲೇ ಬೇಕಾದ ಅನಿವಾರ್ಯ. ಅಧ್ಯಕ಼ರಾದ ಶ್ರೀ ರವಿ ಆರ್ ಗರಣಿಯವರು ಹಲವಾರು ಕನಸುಗಳನ್ನು ಹೊತ್ತು ಬಂದಿರುವ ಉತ್ಸಾಹಿ. ಯಾವುದೇ ಇರಲಿ ಮುನ್ನುಗ್ಗಿ ಯಶಸ್ಸಿಯಾಗೋಣ ಎಂದು ಹುರಿದುಂಬಿಸುವ ಕಾರ್ಯದರ್ಶಿ ಶ್ರೀ ಸೃಜನ್ ಲೋಕೇಶ್, ಇಡೀ ತಂಡ ತುಂಬ ಉತ್ಸಾಹದಲ್ಲಿ ಹಲವಾರು ಕಾರ್ಯಕ್ರಮ ಯೋಚಿಸಿ ಅದನ್ನು ಕಾರ್ಯಗತಮಾಡಲು ನಿಂತಿದೆ. ಅದಕ್ಕೆ ನಿಮ್ಮ ಬೆಂಬಲ ಪ್ರೋತ್ಸಾಹ ಇರಲಿ.

ಪತ್ರಿಕೆ ಹೊರತರಲು ವಿಶೇಷ ಕಾಳಜಿ ವಹಿಸುತ್ತಿರುವ ಗೆಳೆಯ ಬುಕ್ಜಾಪಟ್ಟಣ ವಾಸು. ನಿಮ್ಮ ಶ್ರಮ ಆಲೋಚನೆ, ಯೋಜನೆ, ಸಂಘಕ್ಕೆ, ಪತ್ರಿಕೆಗೆ ನೀವು ಕೂಡ ಕಾರಣ. ನಿಮಗೆ ನನ್ನ ಶುಭಾಶಯಗಳು.

ನಿಂದಕರಿರಬೇಕಯ್ಯ ಜಗದಲಿ ಎಂಬ ದಾಸರ ಪದವನ್ನು ದಿನಾ ನೆನೆಯುತ್ತಾ ಸಂಘದ ಅಭಿವೃದ್ದಿಯ ಕಡೆ ಗಮನ ಹರಿಸೋಣ. ಎಲ್ಲಾ ಕೆ.ಟಿ.ವಿ.ಎ. ಕಾರ್ಯಕಾರಿ ಸಮಿತಿಯ ಚೈತನ್ಯಗಳಿಗೆ ಹಿಗ್ಗದಿರಿ ಕುಗ್ಗದಿರಿ ಎನ್ನುತ್ತಾ ಎಲ್ಲ ಪ್ರೀತಿಯ ಕೆ ಟಿ.ವಿ ಎ ಸದಸ್ಯ ಬಂಧುಗಳಿಗೆ ಬನ್ನಿ ಸಂಘಟಿತರಾಗೋಣ, ಸಂಘವನ್ನು ಬಲಪಡಿಸೋಣ. ಎನ್ನುತ್ತಾ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.

ShareShareSendShareTweetSend

Leave a Reply Cancel reply

Your email address will not be published. Required fields are marked *

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್

ಕನ್ನಡ ದೂರದರ್ಶನ ಉದ್ಯಮದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.

ಕ್ವಿಕ್ ಲಿಂಕ್ಸ್

  • ನಮ್ಮ ಕುರಿತು
  • ಯೋಜನೆಗಳು
  • ಕಾರ್ಯಕ್ರಮಗಳು
  • ಲೇಖನಗಳು
  • ಸುದ್ಧಿಗಳು
  • ಸಂಪರ್ಕಿಸಿ

ಫಾಲೋ ಅಸ್

ಡೌನ್‌ಲೋಡ್ ಆಂಡ್ರಾಯ್ಡ್ ಅಪ್ಲಿಕೇಶನ್‌

  • ನಮ್ಮ ಕುರಿತು
  • ಸಂಪರ್ಕಿಸಿ
  • ಪ್ರೈವಸಿ ಪಾಲಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech