ಒಂದು ಮೈದಾನದಲ್ಲಿ ಒಂದಷ್ಟು ಮನರಂಜನಾ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತದೆ. ಜೊತೆಗೆ ತಿಂಡಿ ತಿನಿಸುಗಳ ಅಂಗಡಿ, ಬಟ್ಟೆ ಅಂಗಡಿಗಳನ್ನು ಕೆಟಿವಿಎ ತನ್ನ ಸಾರಥ್ಯದಲ್ಲಿ ಆಯೋಜಿಸಲಾಗುತ್ತದೆ. ಅಲ್ಲಿಗೆ ನಮ್ಮ ಕಲಾವಿದರು, ತಂತ್ರಜ್ಞರುಗಳೆಲ್ಲ ಆಗಮಿಸಿ ತಮಗೆ ಇಷ್ಟವಾಗಿದ್ದನ್ನು ಖರೀದಿಸಿ ಎಲ್ಲರೊಟ್ಟಿಗೆ ಸಮಯ ಕಳೆಯಬಹುದು. ಇದರಿಂದ ಬಂದ ಲಾಭವನ್ನು ಕೆಟಿವಿಎಯ ಹಲವು ಯೋಜನೆಗಳಿಗೆ ಸದುಪಯೋಗಗೊಳಿಸಲಾಗುತ್ತದೆ.
