ಕನ್ನಡ ಕಿರುತೆರೆ ಮಾಧ್ಯಮದಲ್ಲಿನ ವಿದ್ಯಾಮಾನಗಳನ್ನು ಹತ್ತು ಹಲವಾರು ಉಪಯುಕ್ತ ಮಾಹಿತಿಯನ್ನು ಮಾಸಿಕ ಸಂಚಿಕೆಯ ರೂಪದಲ್ಲಿ ಪ್ರಕಟಿಸಿ 2000 ಪ್ರತಿಗಳನ್ನು ಸದಸ್ಯರುಗಳಿಗೆ ಉಚಿತವಾಗಿ ಹಂಚಲಾಗುವುದು. ಮುಂದಿನ ದಿನಗಳಲ್ಲಿ ಇದರಲ್ಲಿ ಧಾರಾವಾಹಿ ಜಾಹೀರಾತು, ನಿರ್ಮಾಣ ಸಂಸ್ಥೆಯ ಜಾಹೀರಾತು, ಪ್ರತ್ಯೇಕವಾಗಿ ಕಲಾವಿದರ, ತಂತ್ರಜ್ಞರ ಜಾಹೀರಾತು ಹಾಗೂ ಬರ್ತಡೇ ವಿಶಸ್ ಕೂಡ ಪ್ರಕಟಿಸಲಾಗುವುದು. ಇಷ್ಟಲ್ಲದೇ ಇದೇ ಟಿ.ವಿ – ಠೀವಿ ಸಂಚಿಕೆಯನ್ನು ಈ ಡಿಜಿಟಲ್ ಯುಗದಲ್ಲಿ ಸದಸ್ಯರಿಗಾಗಿ ನೂತನವಾಗಿ ಡಿಜಿಟಲ್ ಇ ಮ್ಯಾಗಜೀನ್ ರೂಪಿಸಿ ನಿಮ್ಮ ಮೊಬೈಲ್ಗಳಿಗೆ ತಲುಪುವಂತೆ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.
