KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ
No Result
View All Result
KTV Association - ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್
No Result
View All Result

ಕೆ ಟಿ ವಿ ಎ ಸದಸ್ಯರ ಮಾಹಿತಿಯನ್ನು ನವೀಕರಿಸುವ ಕಾರ್ಯಕ್ರಮ ಆರಂಭವಾಗಿದೆ

July 9, 2023
0 0
ಕಾರ್ಡ್ ಮಾದರಿ

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತನ್ನ ಸರ್ವ ಸದಸ್ಯರ ಪಟ್ಟಿಯನ್ನು ಸಿದ್ಧಗೊಳಿಸಿಕೊಂಡಿದೆ. ಒಂದು ವಿಷಾದಕರ ವಿಚಾರವೇನೆಂದರೆ ಇಷ್ಟು ವರ್ಷಗಳಿಂದ ಸಂಘವು ಅಸ್ತಿತ್ವದಲ್ಲಿದ್ದರೂ ತನ್ನ ಸದಸ್ಯರಿಂದ ಆಜೀವ ಸದಸ್ಯತ್ವಕ್ಕೆ ಶುಲ್ಕ ಪಡೆದಿದ್ದರೂ, ವಾರ್ಷಿಕ ಶುಲ್ಕ ಪಡೆದಿದ್ದರೂ, ಯಾವುದೂ ಕೂಡ ವ್ಯವಸ್ಥಿತವಾಗಿ ದಾಖಲೀಕರಣವಾಗಿಲ್ಲ ಎಂಬುದಕ್ಕೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವಿಷಾದ ವ್ಯಕ್ತಪಡಿಸುತ್ತದೆ.

ಕಾರಣಗಳು ಏನೇ ಇದ್ದರೂ ಕೂಡ ಈ ಹಿಂದಿನ ಆಡಳಿತ ವರ್ಗ ಸೂಕ್ತ ದಾಖಲೆಗಳನ್ನು ವ್ಯವಸ್ಥಿತವಾಗಿ ಸಿದ್ಧಗೊಳಿಸಿಲ್ಲದೆ ಇರುವುದು ನಮ್ಮ ಸಮಸ್ಯೆಗಳನ್ನು ಹೆಚ್ಚಿಸಿದೆ ಆದರೆ ಕಳೆದು ಹೋದದ್ದನ್ನು ಚಿಂತಿಸುತ್ತಾ ದೂಷಿಸುತ್ತಾ ಕೂರುವುದಕ್ಕಿಂತ ನಮ್ಮಿಂದ ಸಾಧ್ಯವಾದಷ್ಟೂ ಸರಿಪಡಿಸಲು ಪ್ರಯತ್ನಿಸೋಣ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದರ ಕುರಿತು ಯೋಚಿಸೋಣ ಎಂದು ಅಸೋಸಿಯೇಷನ್ ಆಡಳಿತ ವರ್ಗ ತನ್ನ ಸದಸ್ಯರಿಗೆ ಕರೆ ನೀಡಿದೆ.

ಪ್ರಸ್ತುತ ಸಂಘದ ನಿಯಂತ್ರಣದಲ್ಲಿರುವ ಸರ್ವ ಸದಸ್ಯರ ಮಾಹಿತಿ ಕೋಶ (database) ಸಾಕಷ್ಟು ಗೊಂದಲಗಳಿಂದ ಕೂಡಿದೆ. ಇದನ್ನು ಸರಿಪಡಿಸಲು ಪ್ರತಿದಿನ ಕನಿಷ್ಠ 200 ಸದಸ್ಯರಿಗೆ ಕರೆ ಮಾಡಿ ವಿವರಗಳನ್ನು ದಾಖಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸದಸ್ಯರೇ ನೇರವಾಗಿ ಕಚೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಸದಸ್ಯತ್ವದ ಸಂಖ್ಯೆಯನ್ನು ಹೇಳಿ ಅದರ ವಿವರಗಳನ್ನು ಪಡೆದುಕೊಂಡು ಸರಿಪಡಿಸಿ ಕಳಿಸಲು ಕೋರಲಾಗಿದೆ.

ಸಂಘದ ಸದಸ್ಯತ್ವದ ಮಾಹಿತಿ ಕೋಶ (ಡಾಟಾಬೇಸ್) ನಿರ್ಮಿಸಲು ಅಗತ್ಯವಾಗಿ ಬೇಕಾಗಿರುವ ಕೆಲವು ಮಾಹಿತಿಗಳು ಎಂದರೆ :

  1. ಸದಸ್ಯರ ಪೂರ್ಣ ಹೆಸರು member full name
  2. ಸದಸ್ಯರ ಭಾವಚಿತ್ರ member photo
  3. ಜನ್ಮ ದಿನಾಂಕ date of birth
  4. ಸಂಪರ್ಕ ಸಂಖ್ಯೆ/ಪರ್ಯಾಯ ಸಂಖ್ಯೆ contact number/alternate number
  5. ಸದಸ್ಯರ ಭಾವಚಿತ್ರ ದೃಡೀಕರಣ ಪ್ರಮಾಣ ಪತ್ರ photoproof
  6. ಸದಸ್ಯರ ವಿಳಾಸ address
  7. ಸದಸ್ಯರ ವೃತ್ತಿ profession
  8. ಸದಸ್ಯರ ಮೇಲ್ ಐಡಿ mail ID
  9. ಸದಸ್ಯರ ಸದಸ್ಯತ್ವದ ವರ್ಗ lifetime/yearly

ಪ್ರಥಮ ಹಂತದಲ್ಲಿ ಇದಿಷ್ಟು ಮಾಹಿತಿಗಳನ್ನು ಸಂಗ್ರಹಿಸಲು ಯೋಚಿಸಲಾಗಿದೆ. ಮುಂದಿನ ಹಂತದಲ್ಲಿ ಹೊಸ ಹೊಸ ಯೋಜನೆಗಳಿಗೆ ಅನುಗುಣವಾಗಿ ಮತ್ತಷ್ಟು ಮಾಹಿತಿಗಳ ಸಂಗ್ರಹಣೆಯನ್ನು ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗುವುದು.

ಜುಲೈ 25ರ ಒಳಗೆ ಈಗಾಗಲೇ ಸದಸ್ಯರಾಗಿರುವ ಎಲ್ಲ ಸದಸ್ಯರ ಮಾಹಿತಿ ಸಂಪೂರ್ಣವಾಗಿ ಸರಿಪಡಿಸಿಕೊಳ್ಳಲು ಗಡುವು ನೀಡಲಾಗಿದೆ. ಸರ್ವ ಸದಸ್ಯರು ಸಹಕರಿಸಬೇಕಾಗಿ ಕೋರಲಾಗಿದೆ.

ShareShareSendShareTweetSend

Leave a Reply Cancel reply

Your email address will not be published. Required fields are marked *

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್

ಕನ್ನಡ ದೂರದರ್ಶನ ಉದ್ಯಮದಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದೆ.

ಕ್ವಿಕ್ ಲಿಂಕ್ಸ್

  • ನಮ್ಮ ಕುರಿತು
  • ಯೋಜನೆಗಳು
  • ಕಾರ್ಯಕ್ರಮಗಳು
  • ಲೇಖನಗಳು
  • ಸುದ್ಧಿಗಳು
  • ಸಂಪರ್ಕಿಸಿ

ಫಾಲೋ ಅಸ್

ಡೌನ್‌ಲೋಡ್ ಆಂಡ್ರಾಯ್ಡ್ ಅಪ್ಲಿಕೇಶನ್‌

  • ನಮ್ಮ ಕುರಿತು
  • ಸಂಪರ್ಕಿಸಿ
  • ಪ್ರೈವಸಿ ಪಾಲಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಹೋಂ
  • ನಮ್ಮ ಕುರಿತು
    • ನಮ್ಮ ಪದಾಧಿಕಾರಿಗಳು
  • ಕಾರ್ಯಕ್ರಮಗಳು
  • ಯೋಜನೆಗಳು
  • ಲೇಖನಗಳು
  • ಸುದ್ಧಿಗಳು
  • ಮ್ಯಾಗಝಿನ್
  • ಗ್ಯಾಲರಿ
    • ಫೋಟೋಗಳು
    • ವೀಡಿಯೊಗಳು
  • ಸಂಪರ್ಕಿಸಿ

© 2022 - 2023, Karnataka Television Association All Rights Reserved. Design and Developed by: Ekaashara Infotech