
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಸಂಸ್ಥೆಯು ತನ್ನ ಸದಸ್ಯರಿಗಾಗಿ ಐಡಿ ಕಾರ್ಡ್ (ಗುರುತು ಪತ್ರ ಯೋಜನೆ)ಯನ್ನು ಪ್ರಾರಂಭಿಸಿದೆ. ತನ್ನ ಸಂಘದ ಸದಸ್ಯರು ಎಲ್ಲಿಯೇ ಹೋದರೂ ಗುರುತು ಪತ್ರದ ಧೃಡೀಕರಣವಿದ್ದರೆ ಒಂದು ಘನತೆ ಇರುತ್ತದೆ ಮತ್ತು ಆಗಬೇಕಾದ ಕೆಲಸಗಳು ಸುಲಲಿತವಾಗಿ ಆಗುತ್ತದೆ ಎಂದು ಸಂಸ್ಥೆಯು ನಂಬಿರುತ್ತದೆ. ಸಂಘಕ್ಕೆ ಸಕಾಲಕ್ಕೆ ಸಮರ್ಪಕವಾದ ವಿಷಯ ವಿಚಾರಗಳನ್ನು ತಲುಪಿಸಲು ಸದಸ್ಯರಿಗೆ ಅನುಕೂಲವಾಗುತ್ತದೆ ಎಂಬುದು ಇದರ ಹಿಂದಿರುವ ಆಲೋಚನೆ. ಸರ್ಕಾರಿ ಸಂಸ್ಥೆಗಳಲ್ಲಿ ಅಗತ್ಯವಿರುವ ಪ್ರಮಾಣಪತ್ರಗಳಿಗಾಗೀ ಅಥವಾ ವ್ಯವಹಾರಿಕ ಅನುಕೂಲಕ್ಕಾಗಿ ಅಥವಾ ಪರಿಚಯಾತ್ಮಕ ಪ್ರಕ್ರಿಯೆಗಳಿಗಾಗಿ… ಸಂಘದ ವತಿಯಿಂದ ಕೊಡ ಮಾಡುವ ಗುರುತಿನ ಪತ್ರವು ಅತ್ಯಂತ ಮುಖ್ಯವಾಗುತ್ತದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಸೋಸಿಯೇಷನ್ ನಲ್ಲಿ ಇರುವ ಎಲ್ಲ ಸದಸ್ಯರ ಸದಸ್ಯತ್ವದ ನವೀಕರಣಕ್ಕೆ ಚಾಲನೆ ನೀಡಿದೆ. ಸಂಘ ಸದಸ್ಯರ ಕಾರ್ಡ್ ಮುದ್ರಿತವಾಗುವ ಸಮಯದಲ್ಲಿ ಅಗತ್ಯವಾಗಿ ಬೇಕಾದ ಎಲ್ಲ ಮಾಹಿತಿಗಳನ್ನು ಕ್ರೂಢೀಕರಿಸಲು ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾರ್ಡ್ ಪಡೆಯಲು ಹೆಚ್ಚಿಸುವವರು ಅದಕ್ಕೆ ಅಗತ್ಯವಿರುವ ಶುಲ್ಕವನ್ನು ಪಾವತಿಸಿ ಕಚೇರಿಯಲ್ಲಿ ತಮ್ಮ ಗುರುತಿನ ಕಾರ್ಡ್ ಪಡೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.
ಮುಂದಿನ ತಿಂಗಳು ಅಂದರೆ ಜುಲೈ 10 ನೇ ತಾರೀಖಿನ ನಂತರ ಸದಸ್ಯರಿಗೆ ಅಧಿಕೃತ ಗುರುತು ಪತ್ರ ಅಥವಾ ಐಡಿ ಕಾರ್ಡ್ ವಿತರಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಸದಸ್ಯರಾಗಿರುವವರು ಸಂಘದ ದಾಖಲೆಗಳಲ್ಲಿರುವ ತಮ್ಮ ಮಾಹಿತಿ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಇಲ್ಲಿ ಸೂಚಿಸಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪರಿಶೀಲಿಸಿಕೊಳ್ಳಲು ವಿನಂತಿಸಲಾಗಿದೆ.
ಹೊಸ ಸದಸ್ಯರು ಸಂಸ್ಥೆಗೆ ಆಗಮಿಸಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಮನವಿ ಪತ್ರಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಆನ್ಲೈನ್ ರಿಜಿಸ್ಟ್ರೇಷನ್ ಮಾಡಿಸಲು ಇನ್ನೂ ಸಾಕಷ್ಟು ಕಾಲಾವಕಾಶದ ಅಗತ್ಯವಿದ್ದು ಮುಂದಿನ ದಿನಗಳಲ್ಲಿ ಆನ್ಲೈನ್ ನೋಂದಣಿ ಕಾರ್ಯಕ್ರಮವನ್ನು ಯೋಚಿಸಲಾಗಿದೆ.
ಸಂಘದ ಎಲ್ಲ ಸದಸ್ಯರು ತಪ್ಪದೆ ತಮ್ಮ ಮಾಹಿತಿಗಳನ್ನು ಸಂಸ್ಥೆಯ ಕಚೇರಿಯ ದೂರವಾಣಿಗೆ ಕರೆ ಮಾಡಿ ಸರಿಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ವಿನಂತಿಸಿದ್ದಾರೆ.
